ಆಗಸ್ಟ್
	ಜೂಲಿಯನ್ ಕ್ಯಾಲೆಂಡರಿನ 8ನೆಯ ತಿಂಗಳು. ರೋಮಕ ಸಾಮ್ರಾಟರಲ್ಲಿ ಅತ್ಯಂತ ಪ್ರಸಿದ್ಧ ದೊರೆ ಅಗಸ್ಟಸ್‍ನ  (ನೋಡಿ- ಅಗಸ್ಟಸ್-ಅಕ್ಟೇವಿಯಸ್) ಗೌರವಾರ್ಥ ಈ ಹೆಸರನ್ನಿಡಲಾಗಿದೆ. ಇದಲ್ಲದೆ ಅಗಸ್ಟಸ್‍ನ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳನೇಕವು ಈ ತಿಂಗಳಲ್ಲಿ ನಡೆದುವೆಂದು ತಿಳಿದು ಬಂದಿದೆ. ಜೂಲಿಯನ್ ಕ್ಯಾಲೆಂಡರ್ ರೂಪುಗೊಳ್ಳುವ ಮೊದಲು ಬಳಕೆಯಲ್ಲಿದ್ದ ಕ್ಯಾಲೆಂಡರುಗಳಲ್ಲಿ ಇದನ್ನು 6ನೆಯ ತಿಂಗಳಾಗಿ ಪರಿಗಣಿಸಲಾಗಿದ್ದು ಇದನ್ನು ಸೆಕ್ಸ್‍ಟಿಲೀಸ್ ಎಂದು ಕರೆಯಲಾಗಿತ್ತು. ಈ ತಿಂಗಳಿನಲ್ಲಿ 31 ದಿವಸಗಳದ್ದು, ಮೊದಲನೆಯ ದಿವಸವನ್ನು ಲಾಮಾಸ್ ಡೇ (ಸುಗ್ಗಿ ಹಬ್ಬದ ದಿನ) ಮತ್ತು ಗೂಲ್ ಅಗಸ್ಟಸ್ ಎಂದೂ ಕರೆಯುತ್ತಾರೆ.
(ನೋಡಿ- ತಾರೀಕುಪಟ್ಟಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ